Belagavi

ಕಾಂಗ್ರೇಸ್ ದಿಗ್ಗಜ ನಾಯಕರು ಬೆಳಗಾವಿಗೆ; ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಮಹತ್ವದ ಚರ್ಚೆ

Share

ಹುಬ್ಬಳ್ಳಿಯಿಂದ ಬೆಳಗಾವಿಗೆ ಮಹಾನಗರ ಪಾಲಿಕೆಯ ರಾಜಕೀಯ ಶಿಫ್ಟ ಆಗಿದೆ.ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಹಿನ್ನಲೆ ಬೆಳಗಾವಿಯಲ್ಲಿ ಕಾಂಗ್ರೇಸ್‍ನ ಮಹತ್ವದ ಸಭೆ ನಡೆದಿದೆ.

ಪಾಲಿಕೆ ಚುನಾವಣೆ ಹಿನ್ನೆಲೆ ಬೆಳಗಾವಿಯಲ್ಲಿ ರಾಜಕೀಯ ಬೆಳವಣಿಗೆಗಳು ಗರಿಗೆದರಿವೆ. ಹುಬ್ಬಳ್ಳಿ ಕಾಂಗ್ರೆಸ್ ನಾಯಕರಿಂದ ಬೆಳಗಾವಿಯಲ್ಲಿ ಖಾಸಗಿ ರೆಸಾರ್ಟ್‍ನಲ್ಲಿ ಸಭೆ ನಡೆದಿದೆ.ಮಾಜಿ ಸಚಿವರಾದ ಸತೀಶ್ ಜಾರಕಿಹೋಳಿ , ಶಿವಾನಂದ ಪಾಟೀಲ, ಆರ್ ವಿ ದೇಶಪಾಂಡೆ, ನಾಗರಾಜ್ ಛಬ್ಬಿ, ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಸೇರಿದಂತೆ ಹಲವು ನಾಯಕರು ಈ ಸಭೆಯಲ್ಲಿ ಭಾಗಿಯಾಗಿದ್ದಾರೆ.


ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ 150ಕ್ಕೂ ಹೆಚ್ಚು ಆಕಾಂಕ್ಷಿಗಳು ಕೂಡ ಇದರಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಪಕ್ಷದ ಅಭ್ಯರ್ಥಿಗಳ ಪಟ್ಟಿ ಮಾಡುವ ಹಿನ್ನಲೆ ಈ ಸಭೆಯಲ್ಲಿ ಆಯೋಜಿಸಲಾಗಿತ್ತು. ಈಗಾಗಲೇ 75% ಕ್ಷೇತ್ರದ ಟಿಕೆಟ್ ಪೈನಲ್ ಆಗಿದ್ದು, ಉಳಿದ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಇನ್ನು ಫೈನಲ್ ಆಗಲಿದೆ. ಗೆಲವು ತಂತ್ರಗಾರಿಕೆಯ ಕುರಿತು ನಾಯಕರ ಮಹತ್ವದ ಸಭೆಯನ್ನ ನಡೆಸಲಾಗಿದೆ.ರವಿವಾರ ಸಂಜೆ ಎμÉ್ಟೂತ್ತಿದೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪೈನಲ್ ಆಗುವ ಸಾಧ್ಯತೆ ಇದೆ.